Viveka Chudamani Viveka Chudamani

ವಿವೇಕ ಚೂಡಾಮಣಿ (ಆದಿ ಶಂಕರಾಚಾರ್ಯ ವಿರಚಿತ ವ್ಯಾಖ್ಯಾನ ಸ್ವಾಮಿ ಪ್ರಬೋದಾನಂದ)



ವಿವರಣೆ:


ಆದಿಶಂಕರರ ಅನೇಕ ಗ್ರಂಥಗಳಲ್ಲಿ ವಿವೇಕ ಚೂಡಾಮಣಿ ಮೇರುಶಿಖರವಿದ್ದ೦ತೆಹಾಗೂ ವಿವೇಕಕ್ಕೆ ಮುಕುಟ ರತ್ನ ಪ್ರಾಯವಾಗಿದೆ.ಗೀತೆಯಲ್ಲಿ ಅಧ್ಯಾತ್ಮ ಜ್ಞಾನವನ್ನು ಹೇಗೆ ಶ್ರೀ ಕೃಷ್ಣಾರ್ಜುನರ ಸಂವಾದ ರೂಪದಲ್ಲಿ ಹೇಳಲಾಗಿದೆಯೋ ಹಾಗೆಯೇ ವಿವೇಕ ಚೂಡಾಮಣಿಯಲ್ಲಿ ಗುರು-ಶಿಷ್ಯರ ಸಂಭಾಷಣಾ ಶೈಲಿಯಲ್ಲಿ ಆಚಾರ್ಯ ಶಂಕರರುಸಮಗ್ರ ವೇದಾಂತ ಪಕ್ರಿಯ ತತ್ವಗಳನ್ನು ಮಂಡಿಸಿದ್ದಾರೆ. ಶ್ರೀ ಪ್ರಬೋಧಾನಂದ ಸ್ವಾಮೀಜಿಗಳು ಈ ಮಹಾನ್ ಗ್ರಂಥವನ್ನು ಸರಳವಾಗಿ ತರ್ಕಬದ್ಧವಾಗಿ ಅನೇಕ ಉಪಮಾನ ಗಳಿಂದಅದ್ವೈತಸಿದ್ಧಾಂತಗಳನ್ನುಸುಲಭವಾಗಿ ಪಾಮರರು ಗ್ರಹಿಸಲು ಅನುಕೂಲವಾಗುವಂತೆ ಕನ್ನಡದಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಈ ಗ್ರಂಥದಲ್ಲಿ77 ವಿಭಾಗಗಳು, 579 ಶ್ಲೋಕಗಳಿಂದಅದ್ವೈತ ಸಿದ್ಧಾಂತವನ್ನು ನಿರೂಪಿಸಲ್ಪಟ್ಟಿದೆ.ಇದರ ಪ್ರತಿಯೊಂದು ಶ್ಲೋಕಕ್ಕೂ ಪ್ರತಿಪದಾರ್ಥ, ತಾತ್ಪರ್ಯ, ವ್ಯಾಖ್ಯಾನವನ್ನು ಭಗವದ್ಗೀತೆ ಉಪನಿಷತ್ತುಗಳ ಪ್ರಮಾಣ ಸಹಿತ ಕೊಡಲಾಗಿದೆ. ಈ ಮಹಾನ್ ಗ್ರಂಥಕ್ಕೆ ಶೃಂಗೇರಿ ಶಾರದಾ ಪೀಠದ ಪೀಠಾಧ್ಯಕ್ಷರಾದ ಪೂಜ್ಯಪಾದ ಶ್ರೀ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಗಳು ಮುನ್ನುಡಿಬರೆದು ಆಶೀರ್ವಾದಪೂರ್ವಕವಾಗಿ ಅನುಗ್ರಹಿಸಿದ್ದಾರೆ.
ಪುಟ : 510  ಬೆಲೆ : 450ರೂ.ಗಳು