ಪುರಾಣ ಕಥೆಗಳು

ಅನಸೂಯೆಯ ಮಹಾ ಪತಿವ್ರತದ ಮಹಿಮೆ ತಂದೆ ಕರ್ದಮ ಮುನಿ ತಾಯಿ ದೇವಹೂತಿಯವರಲ್ಲಿ 9ನೇ ಮಗಳಾಗಿ ಅನಸೂಯ ಜನಿಸಿದಳು. ಆಕೆಯ ಪತಿ ಅತ್ರಿ. ಸಪ್ತಋಷಿಗಳಲ್ಲಿ ಒಬ್ಬ. ಬ್ರಹ್ಮ ಮಾನಸಪುತ್ರ ದತ್ತಾತ್ರೇಯ ಮಗ. ಅನಸೂಯ ಮಹಾ ಪತಿವ್ರತೆ. ಆಕೆಯ ಪತಿವ್ರತ ಧರ್ಮವನ್ನು ಪರೀಕ್ಷಿಸಲು ತ್ರಿಮೂರ್ತಿಗಳು ಬಂದರು. ಭಿಕ್ಷೆ ಹಾಕಲು ಹೋದಳು. ನೀನು ನಿರ್ವಸ್ತ್ರದಿಂದ ಭಿಕ್ಷೆ ಹಾಕು ಎಂದರು. ಆ ಕೂಡಲೆ ತನ್ನ ಪತಿಯ ಪಾದ ತೊಳೆದು ಆ ನೀರನ್ನು ಆ ತ್ರಿಮೂರ್ತಿಗಳ ಮೇಲೆ ಪ್ರೋಕ್ಷಣೆ ಮಾಡಿದಳು. ಆ ಕೂಡಲೇ ಅವರೆಲ್ಲ ಚಿಕ್ಕ ಮಕ್ಕಳಾದರು. ಆಗ ಅನಸೂಯ ಅವರನ್ನು ಎತ್ತಿಕೊಂಡು ನಿರ್ವಸ್ತ್ರದಿಂದ ತನ್ನ ಎದೆ ಹಾಲನ್ನೇ ಕೊಟ್ಟಳು ಅಂಥ ಪತಿವ್ರತೆ. ದತ್ತಾತ್ರೇಯ, ಚಂದ್ರ, ದೂರ್ವಾಸರು ಆಕೆ ಮಕ್ಕಳು. ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ, ಪಾರ್ವತಿಯರು ಬಂದು ಪತಿ ಭಿಕ್ಷೆ ಬೇಡಿದಾಗ ಸಣ್ಣ ಮಕ್ಕಳಾದ ತ್ರಿಮೂರ್ತಿಗಳನ್ನು ಇವರಿಗೆ ಕೊಟ್ಟಳು. ಇದೇ ಪತಿವ್ರತಾ ಮಹಾವ್ರತ. ಈಕೆ ಒಮ್ಮೆ ತನ್ನ ಪತಿ ಅತ್ರಿ, ಹೆಳವ ಕಾಲಿಲ್ಲ. ಅವನನ್ನು ಎತ್ತಿಕೊಂಡು ಹೋಗುತ್ತಿರುವಾಗ ಅತ್ರಿಯ ಪಾದ ದಾರಿಯಲ್ಲಿ ತಪಸ್ಸಿಗೆ ಕುಳಿತಿರುವ ಋಷಿಯೋರ್ವನಿಗೆ ತಗಲಿದವು. ಆ ಋಷಿ ಕೋಪೋದ್ರಿಕ್ತನಾಗಿ “ನಾಳೆ ಸೂರ್ಯ ಉದಯವಾಗುವುದರೊಳಗಾಗಿ ಅವನು ಸತ್ತು ಹೋಗಲಿ” ಎಂದು ಶಾಪ ಕೊಟ್ಟನು. ಈ ವಿಷಯ ಅನಸೂಯಳಿಗೆ ತಿಳಿಯಿತು. ಕೂಡಲೇ ಸೂರ್ಯ ಉದಯವಾಗದಂತೆ ಸೂರ್ಯನನ್ನು ಪ್ರಾರ್ಥಿಸಿದಳು. ಸರಿ ಪತಿವ್ರತೆಯ ಧರ್ಮದಂತೆ ಸೂರ್ಯ ಉದಯವಾಗಲೇ ಇಲ್ಲ. ಲೋಕವೆಲ್ಲಾ ಅಲ್ಲೋಲ ಕಲ್ಲೋಲ ಆಯಿತು. ಆಗ ಅನಸೂಯೆಯನ್ನು ಎಲ್ಲರೂ ಬಂದು ಬೇಡಿಕೊಂಡರು. ಆಗ ಆ ಶಾಪ ಕೊಟ್ಟ ಋಷಿಯೂ ಬಂದನು. ಅವನ ಶಾಪವನ್ನು ವಾಪಾಸು ಪಡೆದ ಮೇಲೆ ಸೂರ್ಯ ದೇವ ಪ್ರತ್ಯಕ್ಷನಾದನು. ಇದೇ ಭಾರತ ಮಹಿಳೆಯ ಉನ್ನತಸ್ಥಾನ. ಇದೇ ಪತಿವ್ರತೆಯ ಮಹಾತ್ಮೆ. ನಮ್ಮ ದೇಶದಲ್ಲಿ ಪತಿವ್ರತೆಯರು ಇರುವ ದೇಶ. ಯುಗದಿಂದ ಯುಗಕ್ಕೆ ಎಷ್ಟೇ ವ್ಯತ್ಯಾಸವಾದರು ನಾಗರಿಕತೆಯನ್ನು ಹೊಂದಿಕೊಂಡು ಬೆಳೆಸಿಕೊಳ್ಳುತ್ತಿದೆ. ಈ ಭದ್ರತೆಗೆ ಈ ಉನ್ನತಿಗೆ ಮೂಲಾಧಾರ ಸ್ತ್ರೀ ಕುಲದ ಮನೋಧರ್ಮ. ಅವರ ಶೀಲ, ಅವರ ತ್ಯಾಗ ಅವರಿಂದ ಬಂದ ಅಕ್ಷಯ ಸಂಪತ್ತು ಎಲ್ಲವನ್ನು ರಕ್ಷಿಸಿಕೊಂಡಿದೆ. ಹೀಗೆ ಭಾರತೀಯ ಋಷಿಕೆಯರನ್ನು ಬಹಳ ಶ್ರದ್ಧಾ ಗೌರವಗಳಿಂದ ಸ್ಮರಿಸಬೇಕು. ವೈದಿಕ ಯುಗದಲ್ಲಿ ಗೋದಾ, ಘೋಷಾ, ವಿಶ್ವವಾರ, ಅಪಾಲಾ, ಇಂದ್ರಾಣಿ, ರೋಮಕಾ, ಇಂದ್ರಮಾತಾ, ಮೈತ್ರೇಯಿ, ಸಾವಿತ್ರಿ ದೇವಿಯವರ ಹೆಸರು ಪ್ರಸಿದ್ಧವಾಗಿದೆ. ದೈವದ ಹೊರತಾಗಿ ಯಾರಿಗೂ ನಮಸ್ಕಾರ ಮಾಡದ ಸಂನ್ಯಾಸಿ ತಾಯಿಗೆ ಮೊದಲು ನಮಸ್ಕಾರ ಮಾಡುತ್ತಾನೆ.