Meditate on the symbol OM with intense devotion. It will rid your all ills

Meditate on the symbol OM with intense devotion. It will rid your all ills

Meditate on the symbol OM with intense devotion. It will rid your all ills

jQuery Slider

ಶ್ರೀ ಶಂಕರಾನಂದ ಆಶ್ರಮ ಸುಸ್ವಾಗತ

ಆತ್ಮೀಯರೇ!
ನಮ್ಮ ಸನಾತನ ಧರ್ಮವನ್ನು ಭಾರತೀಯರು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ನಮ್ಮ ಪುರಾತನ ಭಾರತೀಯ ಸಂಸ್ಕೃತಿ ಅನೇಕ ವಿದೇಶಿಯರ ಆಕ್ರಮಣದ ಮಧ್ಯೆಯೋ ಸ್ಥಿರಸ್ಥಾಯಿಯಾಗಿ ಉಳಿದುಕೊಂಡಿದೆ. ನಮ್ಮ ಧರ್ಮವು ವಿಶಾಲ ತಳಹದಿಯಲ್ಲಿ ರಚಿತವಾಗಿದೆ. ಇದಕ್ಕೆ ನಮ್ಮ ವೇದ ಉಪನಿಷತ್ತು ಪುರಾಣವು ಯಾರೋ ಒಬ್ಬರಿಂದ ರಚಿತವಾಗಿಲ್ಲ. ಅದು ಒಬ್ಬರಿಂದ ಇನ್ನೊಬ್ಬರಿಗೆ ಆಚರಣೆಯಿಂದ ನಡೆದುಕೊಂಡು ಬಂದಿದೆ ಹಾಗಾಗಿ, ಅದು ಬೌದ್ಧ, ಜೈನ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದ ಆಕ್ರಮಣವಾದರೂ ದೃಢವಾಗಿದೆ.
ಭಾರತೀಯ ಸಂಸ್ಕೃತಿಯು ಪುರಾತನವಾದುದು. ಈ ಸಂಸ್ಕೃತಿಯ ಸಾರ ನಮ್ಮ ಶ್ರುತಿ ಪುರಾಣಗಳಿಂದ ಬಂದಿದ್ದು. ನಮ್ಮ ಸನಾತನ ಧರ್ಮ ಅನಾದಿಯಾದದ್ದು ಅಪೌರುಷೇಯವಾದುದು ಗುರು ಪರಂಪರೆಯಾಗಿ ಬಂದಿದ್ದು ಅಲ್ಲದೆ ಈ ಉಪನಿಷತ್ತಿನ ತತ್ವವು ಇದರ ಪರಿಮಳವು ನಮ್ಮ ಸಾಹಿತ್ಯ ಇತಿಹಾಸ ಪುರಾಣ, ರಾಮಾಯಣ, ಮಹಾಭಾರತ, ಭಾಗವತ, ಪುರಾಣಕಥೆಗಳು ಭಾರತೀಯರ ಜೀವನದ ತತ್ವಗಳಾಗಿವೆ.
ಆದರೆ ಈಗಿನ ನಮ್ಮ ಸಂಸ್ಕೃತಿ ವಿದೇಶಿಯರ ಆಕರ್ಷಣೆಗೆ ಒಳಗಾಗಿ ನಮ್ಮ ಯುವ ಜನಾಂಗವು ಈ ತತ್ವಗಳೆನ್ನೆಲ್ಲಾ ಮರೆತು ಹೋಗಿದೆಯೇನು ಎಂಬಂತಾಗಿದೆ. ಆದ್ದರಿಂದ ನಮ್ಮ ಭಾರತೀಯ ಸಂಸ್ಕೃತಿಯನ್ನು ಹಾಗೂ ಅದರಲ್ಲಿ ಬರುವ ಸುಪ್ರಸಿದ್ಧ ಮಹಾನ್ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕೆಂಬ ಹಾಗೂ ಸಮಾಜದ ಎಲ್ಲಾ ವರ್ಗಗಳಿಗೂ ಉಚಿತವಾಗಿ ತಲುಪಬೇಕೆಂಬ ಸದುದ್ದೇಶದಿಂದ ಶ್ರೀ ಶಂಕರಾನಂದಾಶ್ರಮವನ್ನು ಸ್ಥಾಪನೆ ಮಾಡಿ ಅದರ ಮುಖಾಂತರ ನಮ್ಮ ಧರ್ಮಗ್ರಂಥಗಳಿಂದ ಆಯ್ದ ಕೆಲವು ಕಥೆಗಳನ್ನು ಸಂಗ್ರಹಿಸಿ, ಗುರುಗಳಿಂದ ಕೇಳಿದ ದೃಷ್ಟಾಂತಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ನಮ್ಮ ಈ ಪ್ರಯತ್ನದ ಉದ್ದೇಶ ಈಡೇರಬೇಕೆಂದರೆ ಇದನ್ನು ಎಲ್ಲರೂ ಓದಿ ಇನ್ನೊಬ್ಬರಿಗೆ ಹೇಳಿ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ``ಸರ್ವೇಜನಾ ಸುಖಿನೋಭವಂತು’’ ಎಂಬ ತತ್ವವನ್ನು ಆಚರಣೆಗೆ ತರೋಣ.
ಇಂತಿ,
ಡಾ|| ಆನಂದಕುಮಾರ್

About us

Mythological Stories

ಪುರಾಣ ಕಥೆಗಳು

ರಾಮಾಯಣ ಕಥೆಗಳು

ಮಹಾಭಾರತ ಕಥೆಗಳು

ಭಾಗವತ ಕಥೆಗಳು

ಉಪನಿಷತ್ತಿನ ಕಥೆಗಳು

ನೀತಿ ಕಥೆಗಳು

Upcoming Events

Our Gallery