ಉಪನಿಷತ್ತಿನ ಕಥೆಗಳು

ಸತ್ಯಕಾಮನ ಸತ್ಯಸಂದತೆ ಛಾಂದೋಗ್ಯ ಉಪನಿಷತ್ತಿನ ಒಂದು ಸತ್ಯಕಥೆ. ಯೋಗ ಭ್ರಷ್ಟನಾದವನು ತಾನು ಪ್ರಾರಂಭಿಸಿದ ಆಧ್ಯಾತ್ಮ ಯೋಗವನ್ನು ಮುಗಿಸಿ ಆತ್ಮ ಸಾಕ್ಷಾತ್ಕಾರ ಪಡೆಯಲು ಪವಿತ್ರರಾದ ಭಾಗ್ಯವಂತರಾದ ಯಾವುದಕ್ಕೂ ಕೊರತೆಯಿಲ್ಲದವರ ಮನೆಯಲ್ಲಿ ಹುಟ್ಟಿ ಬಹುಜಾಗ್ರತೆ ಜ್ಞಾನಯೋಗದಲ್ಲಿ ನಿಷ್ಣಾತನಾಗಿ ಮುಕ್ತಿ ಪಡೆಯುತ್ತಾನೆಂದು ಗೀತಾ 6-14ರಲ್ಲಿ ಹೇಳಿದೆ. ಸತ್ಯಕಾಮನು ಅಂದರೆ ಸತ್ಯವೇ ಮೂರ್ತಿವೆತ್ತಂತವನು. ತನ್ನ ತಾಯಿ ಜಾಬಾಲೆಯನ್ನು ‘ಅಮ್ಮಾ ನಾನು ಶಿಕ್ಷಣ ಪಡೆಯುವುದಕ್ಕೆ ಶ್ರೀ ಗುರುಗಳಲ್ಲಿ ಹೋಗಬೇಕು. ಆದ್ದರಿಂದ ತನ್ನ ತಂದೆಯ ಗೋತ್ರ ಸೂತ್ರ ಹೇಳಮ್ಮ’ ಎಂದು ಕೇಳಿದ. ತಾಯಿಗೆ ಬಹಳ ಸಂತೋಷವಾಯಿತು. ನಾನು ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದವಳು. ಚಿಕ್ಕ ವಯಸ್ಸಿನಲ್ಲಿ ನಿನ್ನ ತಂದೆ ತೀರಿ ಹೋದರು. ಆಗ ನಾನು ಅವರ ಗೋತ್ರ ಇತ್ಯಾದಿ ಕೇಳಲಿಲ್ಲ. ನಾನು ಜಾಬಾಲಿ ನೀನು ಸತ್ಯಕಾಮ ಇಷ್ಟೆ ನನಗೆ ಗೊತ್ತಿರುವುದು ಎಂದು ಹೇಳಿದಳು. ಆ ಕಾಲದಲ್ಲಿ ಗೌತಮ ಋಷಿಗಳು ಪ್ರಸಿದ್ಧರಾದ ವಿದ್ಯಾಭಿಮಾನಿಗಳು. ಅವರಲ್ಲಿ ಹೋಗಿ ತಾನು ವಿದ್ಯಾ ಕಲಿಯುವ ತನ್ನ ಅಪೇಕ್ಷೆಯನ್ನು ಅವರಿಗೆ ನಮಸ್ಕರಿಸಿ ವಿನಯ ವಿಧೇಯತೆಯಿಂದ ವಿದ್ಯಾರ್ಥಿಯಾಗಿರಲು ಪ್ರಾರ್ಥಿಸಿಕೊಂಡ. ಹಾಗಾದರೆ ನಿನ್ನ ಗೋತ್ರ ಇತ್ಯಾದಿ ವಿಷಯಗಳು ಬೇಕು. ಸ್ವಾಮಿ ನನ್ನ ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿದರು. ಆಗ ಗೋತ್ರ ಸೂತ್ರ ಕೇಳಲು ನಮ್ಮ ತಾಯಿ ಮತ್ತೊಬ್ಬರ ಮನೆಯಲ್ಲಿ ಆಳಾಗಿ ಕೆಲಸ ಮಾಡಿ ಜೀವನ ಮಾಡುತ್ತಿರುವುದರಿಂದ ನಮ್ಮ ಗೋತ್ರಾದಿಗಳನ್ನು ಕೇಳಲಿಲ್ಲ. ನಮ್ಮ ತಾಯಿ ನನಗೆ ಇಷ್ಟೇ ಹೇಳಿದಳು.
‘ನಾನು ಜಾಬಾಲಿ. ನೀನು ಸತ್ಯಕಾಮ ಇಷ್ಟೆ ಹೇಳಿದಳು’ ಎಂದ. ಆಗ ಗೌತಮರು ‘ನೀನು ಸತ್ಯವನ್ನೇ ಹೇಳಿರುವುದರಿಂದ ನೀನು ಬ್ರಾಹ್ಮಣನೇ ಇದ್ದೀಯ’ ಎಂದು ಶಾಲೆಗೆ ಸೇರಿಸಿಕೊಂಡರು. ನೋಡಿ ಸತ್ಯದಲ್ಲಿ ಎಷ್ಟು ಪ್ರಭಾವವಿದೆ! ಅವನಿಗೆ ಬಡಕಲಾಗಿರುವ 400 ಹಸುಗಳನ್ನು ಕೊಟ್ಟು ‘ಇವು ಸಾವಿರ ಆಗುವವರೆಗೆ ಅರಣ್ಯದಲ್ಲಿದ್ದು ಇವುಗಳನ್ನು ಚೆನ್ನಾಗಿ ಮೇಯಿಸಿಕೊಂಡು ಬಾ’ ಎಂದು ಅರಣ್ಯಕ್ಕೆ ಕಳಿಸಿದರು. ಸಹಸ್ರ ಆಗುವವರೆಗೆ ಹಿಂದಿರುಗುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ. ಚೆನ್ನಾಗಿ ಹುಲ್ಲು ನೀರಿರುವ ಕಡೆ ಹೋಗಿ ಹಸುಗಳನ್ನು ಬಿಟ್ಟ. ಅವು ಚೆನ್ನಾಗಿ ಬೆಳೆದು ಮೇದು ಸಾವಿರ ಆದವು. ಆಗ ಕೊನೆ ಕರು ‘ನಾವು ಸಾವಿರ ಆಗಿದ್ದೇವೆ ಸತ್ಯಕಾಮ’ ಎಂದು ಕೂಗಿತು. ಸತ್ಯಕಾಮನು ‘ಭಗವಂತ!’ ಎಂದು ಭಕ್ತಿಯಿಂದ ಹೇಳಿದ. ಸತ್ಯಕಾಮನು ಗುರುಗಳು ಕೊಟ್ಟ 400 ಹಸುಗಳನ್ನು ಗುರುರೂಪದಿಂದ ಪೂಜ್ಯಭಾವದಿಂದ ನೋಡುತ್ತಿದ್ದ. ಆಗ ಆ ಹೋರಿ ‘ನಿನಗೆ ಪರಬ್ರಹ್ಮನ ಒಂದು ಪಾದವನ್ನು ಬೋಧಿಸುತ್ತೇನೆ’ ಎಂದಿತು. ‘ಆಗಲಿ’ ಎಂದು ಆ ಉಪದೇಶ ಕೇಳಿದ.
ಮಾರನೆದಿನ ಅಗ್ನಿಯು ಬ್ರಹ್ಮನ ಮತ್ತೊಂದು ಪಾದವನ್ನು ಉಪದೇಶಿಸಿತು. ಇನ್ನು ಮೂರನೇ ದಿವಸ ಅಗ್ನಿರೂಪದಿಂದ ಹೋರಿಯು ಉಪದೇಶಿಸಿತು, ಹೀಗೆ ಬ್ರಹ್ಮಜ್ಞಾನವನ್ನು ನಾಲ್ಕನೆ ದಿವಸ ಹಂಸರೂಪದಿಂದ ಹೋರಿಯು ಉಪದೇಶಿಸಿತು. ಹೀಗೆ ಬ್ರಹ್ಮನ ಉಪದೇಶ ಹೊಂದಿ ಗುರುಗಳ ಹತ್ತಿರ ಹೋಗುತ್ತಾನೆ. ಸತ್ಯಕಾಮ ನಿನ್ನ ಮುಖವನ್ನು ನೋಡಿದರೆ ನಿನಗೆ ಉಪದೇಶವಾಗಿರುವುದಾಗಿ ತಿಳಿದುಬರುತ್ತದೆ. ನಿನಗೆ ಯಾರು ಉಪದೇಶಿಸಿದರು? ನೀನು ಬ್ರಹ್ಮಜ್ಞಾನಿಯಂತೆ ಕಾಣುತ್ತೀಯ.
1. ಬ್ರಹ್ಮಜ್ಞಾನಿಯಂತೆ ನಿನ್ನ ಇಂದ್ರಿಯಗಳು ಪ್ರಸನ್ನವಾಗಿದೆ.
2. ನಗು ಮುಖದವನಾಗಿದ್ದೀಯ.
3. ನಿಶ್ಚಿಂತನಾಗಿದ್ದೀಯ
4. ಕೃತಾರ್ಥನಾಗಿರುತ್ತೀಯ. ಆದ್ದರಿಂದ ನಿನಗೆ ಯಾರು ಉಪದೇಶಿಸಿದರು.

‘ಸ್ವಾಮಿ ಗುರುದೇವ, ಪೂಜ್ಯರಾದ ನಿಮ್ಮ ಶಿಷ್ಯನಾದ ನನಗೆ ಮನುಷ್ಯನಾಗಿರುವ ನನಗೆ ಮತ್ತಾರು ಉಪದೇಶ ಮಾಡಿಯಾರು? ನಿಮ್ಮ ವಿನಃ ನನಗೆ ಹೇಳಿಕೊಡುವ ಎದೆಗಾರಿಕೆ ಹೇಗೆ ಬರುತ್ತದೆ? ನನಗೆ ನೀವು ಉಪದೇಶಿಸಬೇಕು. ಆಚಾರ್ಯನಿಂದ ಅರಿತುಕೊಂಡ ವಿದ್ಯೆಯು ಸಾಧಿಷ್ಟವನ್ನು ಹೊಂದುತ್ತದೆ. ಆಗ ಆಚಾರ್ಯನು ಹೇಳಿಕೊಟ್ಟರು. ಇದೇ ಷೋಡಶ ಕಲಾ ವಿದ್ಯೆ! ಸತ್ಯಕಾಮನು ಮುಂದೆ ಗುರು ಆದನು

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys