7 ದಿವಸ ಶ್ರೀ ಗೀತಾ ಜಯಂತಿಯನ್ನು ಭಕ್ತಿ ಶ್ರದ್ದೆಯಿಂದ ಬೇರೆ ಬೇರೆ ಊರಿನಿಂದ ಬರುವ ಭಕ್ತರು ಆಚರಿಸುತ್ತಾರೆ. ಹೊರಗಿನಿಂದ ಬಂದವರಿಗೆ ಊಟ ವಸತಿ ಉಚಿತವಾಗಿರುತ್ತವೆ. 7 ದಿವಸವು ಬ್ರಾಹ್ಮೀ ಮೂಹೂರ್ತದಲ್ಲಿ ಕಳಶ ಸ್ಥಾಪನೆ, ಶ್ರೀ ಗಣಪತಿ ಅಷ್ಟೋತ್ತರ, ಶ್ರೀ ಗುರು ಅಷ್ಟೋತ್ತರ, ಶ್ರೀ ಶಿವ ಅಷ್ಟೋತ್ತರ, ಶ್ರೀ ಶಂಕರಾನಂದ ಗುರು ಅಷ್ಟೋತ್ತರ, ಶ್ರೀಮದ್ಬಗವದ್ಗೀತಾ ಅಷ್ಟೋತ್ತರ, ಗೀತೆಯ ಸಾಮೂಹಿಕ ಪಾರಾಯಣ, ಭಜನೆ, ಜ್ಞಾನಿಗಳಿಂದ, ಸ್ವಾಮೀಜಿಗಳಿಂದ ಗೀತೆಯ ಬಗ್ಗೆ ಉಪನ್ಯಾಸ, ಸಂಜೆ ಮಹಾಮಂಗಳಾರತಿಯೊಡನೆ ದಿನದ ಕಾರ್ಯಕ್ರಮ ಮುಗಿಯುವುದು. ಕೊನೆಯ ದಿನ ಭಗವದ್ಗೀತಾ ಯಜ್ಞವನ್ನು ನೆರೆದಿರುವ ಎಲ್ಲಾ ಭಕ್ತರು ತಮ್ಮ ಹವಿಸ್ಸನ್ನು, (ತುಪ್ಪ, ಎಳ್ಳು, ಭತ್ತದ ಅರಳು, ಕೊಬ್ಬರಿ, ಕಾಷ್ಟಗಳು) ಅಗ್ನಿ ಕುಂಡಕ್ಕೆ ಸಮರ್ಪಿಸಬಹುದು.