ಭಾಗವತ ಕಥೆಗಳು

ನಾರದರು ಭೂಮಾ ವಿದ್ಯಾಪಾರಂಗತರು ಒಂದು ಸಾರಿ ನಾರದರು ದೇವಲೋಕಕ್ಕೆ ಹೋಗಿದ್ದರು. ದೇವ ಸಭೆ ಮುಗಿದ ಮೇಲೆ ನಾರದರು ಕುಳಿತ ಸ್ಥಳವನ್ನು ಸ್ವಚ್ಛ ಮಾಡಿದರು. ನಾರದರಿಗೆ ಅವಮಾನವಾಯಿತು. ನಾನು ಕುಳಿತ ಸ್ಥಳ ಸ್ವಚ್ಛ ಮಾಡಬೇಕಾದರೆ ನಾನು ಅಶೌಚಿ ಆಗಿರಬೇಕೆಂದು ಬಹಳ ದುಃಖವಾಯಿತು. ಆ ಶೋಕದಿಂದ ತಪ್ತನಾದ ನಾರದರಿಗೆ ‘ಆತ್ಮವಿತ್ ಶೋಕಂ ತರತಿ’ ಎಂಬ ಒಂದು ಚೀಟಿ ಸಿಕ್ಕಿತು. ‘ಆತ್ಮನನ್ನು ತಿಳಿದರೆ ಶೋಕದಿಂದ ದಾಟುತ್ತೀಯೆ’ ಎಂದು ಅದರ ಅರ್ಥ. ಆತ್ಮನನ್ನು ತಿಳಿಸಿಕೊಡುವವರು ಯಾರು? ದೇವಲೋಕದಲ್ಲಿ ಆ ವಿದ್ಯೆ ಇಲ್ಲ. ಭೂಲೋಕದ ಮಾನವರೆ ಆತ್ಮವನ್ನು ತಿಳಿಸುವವರು. ಆತ್ಮವನ್ನು ತಿಳಿದವರು, ಭೂಲೋಕದಲ್ಲಿ ತಿಳಿಸುವವರು ಯಾರು? ಆಗ ನಾರದರು ಸನತ್ಕುಮಾರರೆಂಬ ಮುನಿಗಳನ್ನು ಭೇಟಿ ಮಾಡಿ ಅನೇಕ ದಿವಸ ಅವರ ಹತ್ತಿರ ಇದ್ದು ಅವರ ಸೇವೆ ಮಾಡಿ, ನಂತರ ನಾರದರು ಆತ್ಮಜ್ಞಾನ ತಿಳಿಯಲು ಯೋಗ್ಯರಾಗಿದ್ದಾರೆಂದು ತಿಳಿದ ಮೇಲೆ ಅವರಿಗೆ ಭೂಮಾ ವಿದ್ಯೆಯನ್ನು ಸನತ್ಕುಮಾರರು ಬೋಧಿಸಿದರು. ಮಾನವನನ್ನು ಉದ್ಧಾರ ಮಾಡುವುದೇ ಈ ಭೂಮಾ ವಿದ್ಯೆ.