ಸಾಧು ಸಂತರ ಕಥೆಗಳು

ಶೃಂಗೇರಿಯ ಸ್ಥಾನದ ಮಹಿಮೆ ಆಚಾರ್ಯ ಶಂಕರ ಭಗವತ್ಪಾದರು ಹತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದು ಬ್ರಹ್ಮಸೂತ್ರ, ಭಗವದ್ಗೀತೆಗೆ ಜಗದ್ವಿಖ್ಯಾತ ಅದ್ವೈತ ತತ್ತ್ವದ ಭಾಷ್ಯ ಬರೆದು ಸುಮಾರು 75 ಸ್ತೋತ್ರ ರತ್ನಗಳನ್ನು ಸುಮಾರು 54 ಅದ್ವೈತ ಗ್ರಂಥಗಳನ್ನು ಬರೆದರು. ಕೊನೆಯಲ್ಲಿ ತಮ್ಮ ತತ್ತ್ವ ಪ್ರಚಾರಕ್ಕಾಗಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಆಚಾರ್ಯ ಶಂಕರ ಭಗವತ್ಪಾದರು ಪೂರ್ಣ ಭಾರತವನ್ನೆಲ್ಲಾ ತಿರುಗಿ ಉತ್ತಮ ಅದ್ವೈತ ಮತವನ್ನು ಸಂಸ್ಥಾಪಿಸಿ ಅದ್ವೈತ ಮತ ಪ್ರಚಾರಕ್ಕಾಗಿ ಮಠ ಸ್ಥಾಪನೆಗಾಗಿ ಶೃಂಗೇರಿಗೆ ದಯಮಾಡಿಸಿದರು. ಅಲ್ಲಿಯ ವನ ಸೌಂದರ್ಯ, ಅಲ್ಲಿಯ ತುಂಗಾನದಿಯ ಹರಿಯುವಿಕೆ ಇದೆಲ್ಲಾ ನೋಡಿ ಮುಂದೆ ಬರುತ್ತಾರೆ. ನದಿಯ ದಂಡೆಯಲ್ಲಿ ಒಂದು ಕಪ್ಪೆ ಮರಿ ಹಾಕುವುದರಲ್ಲಿದೆ. ಆ ಕಪ್ಪೆಗೆ ಒಂದು ಸರ್ಪ ನೆರಳು ಮಾಡುತ್ತದೆ. ಭಗವತ್ಪಾದರಿಗೆ ಆಶ್ಚರ್ಯವಾಯಿತು. ಅಲ್ಲಿ ಯಾರೋ ಒಬ್ಬ ಮಹಾತ್ಮ ತಪಸ್ಸು ಮಾಡಿದ್ದಾನೆ. ಆ ತಪಜ್ವಾಲೆಯು ಎಲ್ಲೆಲ್ಲಿಯೂ ಆನಂದಮಯದ ವಾತಾವರಣ ಸೃಷ್ಟಿ ಆಗಿದೆ ಎಂದು ಅಲ್ಲಿ ಒಂದು ಮಠವನ್ನು ಸ್ಥಾಪಿಸಿದರು. ಅದೇ ಶಾರದಾ ಮಠ. ಆಸ್ಥಾನ ಸುರೇಶ್ವರಾಚಾರ್ಯರ ಸ್ಥಾನವಾಯಿತು, ಜಗದ್ವಿಖ್ಯಾತವಾಯಿತು.