ಸಾಧು ಸಂತರ ಕಥೆಗಳು

ವಿದ್ಯಾರಣ್ಯ ಸ್ವಾಮಿಗಳು ಗಾಯತ್ರಿ ಮಂತ್ರೋಪಾಸಕರು ನಮ್ಮ ದೇಶ ಮಂತ್ರವಿದರ ನಾಡು. 12ನೇ ಶತಮಾನದಲ್ಲಿ ಬಸವಣ್ಣನವರು ಅವತರಿಸಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದರು. ದೇಶವನ್ನೇ ದಿಗ್ವಿಜಯ ಮಾಡಿದರು. ಅದೇ ಕಾಲದಲ್ಲಿ ವಿದ್ಯಾರಣ್ಯರು ಗಾಯತ್ರಿ ಮಂತ್ರವನ್ನು 24 ಲಕ್ಷ ಜಪ ಮಾಡಿ ಆ ಜಪದ ಶಕ್ತಿಯಿಂದ ಗಾಯತ್ರಿ ಮಂತ್ರಾಧಿ ದೇವತೆಯು ಪ್ರತ್ಯಕ್ಷಳಾಗಿ ಬಂದು ಏನು ಬೇಕೆಂದು ಕೇಳಿದರು. ಆಗ ವಿದ್ಯಾರಣ್ಯ ಸ್ವಾಮಿಗಳು ಸಂನ್ಯಾಸಿಗಳಾದುದರಿಂದ ನನಗೆ ಏನು ಬೇಕಾಗಿಲ್ಲ ಎಂದರು. ಇಲ್ಲಿ ನಾನು ಪ್ರತ್ಯಕ್ಷಳಾಗಿ ಬಂದ ಮೇಲೆ ಏನನ್ನಾದರೂ ಕೊಡಬೇಕು ಬೇಡಿಕೊ ಎಂದರು. ಕೊಡುವ ವಸ್ತು ನಿಮ್ಮಲ್ಲೇ ಇರಲಿ. ಅಗತ್ಯವಾದಾಗ ಕೇಳುತ್ತೇನೆ. ಆಗ ಕೊಟ್ಟು ದೇಶಕ್ಕೆ ಉಪಕಾರ ಮಾಡಿ ಎಂದರು. ವಿಜಯನಗರ ಸಾಮ್ರಾಜ್ಯವನ್ನು ಕಟ್ಟುವಾಗ ವಿದ್ಯಾರಣ್ಯ ಸ್ವಾಮಿಗಳು ಗಾಯತ್ರಿ ಮಾತೆಯನ್ನು ಬೇಡಿದಾಗ ಆ ಮಂತ್ರಾದಿದೇವತೆಯು 3¼ ಘಳಿಗೆ ಅಂದರೆ 90 ನಿಮಿಷ ಬಂಗಾರದ ಮಳೆಯನ್ನೇ ಸುರಿಸಿದಳು. ಇದು ಗಾಯತ್ರಿ ಮಂತ್ರದ ಪ್ರಭಾವ. ಗಾಯತ್ರಿ ಮಂತ್ರದ ಪ್ರಭಾವದಿಂದಲೇ ವಿಜಯನಗರವೆಂಬ ಒಂದು ಐತಿಹಾಸಿಕ ಸಾಮ್ರಾಜ್ಯವನ್ನು ಕಟ್ಟಿದರು. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಮುತ್ತು ರತ್ನದ ವ್ಯಾಪಾರ. ಎಲ್ಲೆಲ್ಲಿ ನೋಡಿದರೂ ಬಂಗಾರ ಬೆಳ್ಳಿ, ಎಲ್ಲಿಲ್ಲಿ ನೋಡಿದರೂ ಉತ್ಸಾಹ-ಆಹ್ಲಾದ. ಹಾಗೆ ಒಂದು ಸಾಮ್ರಾಜ್ಯವನ್ನು ಸುಮಾರು 250 ವರ್ಷ ಪ್ರಪಂಚದಲ್ಲಿಯೇ ಉನ್ನತ ಸ್ಥಾನ ಪಡೆದಿದ್ದು ವಿಜಯನಗರ ಸಾಮ್ರಾಜ್ಯ. ಆ ಸಾಮ್ರಾಜ್ಯದ ಮಹೋನ್ನತಿಗೆ ಈಗಿರುವ ದೇವಸ್ಥಾನಗಳೇ ಸಾಕ್ಷಿ. ಗಾಯತ್ರಿ ಮಂತ್ರವೆ ಆಗಲಿ ಮತ್ತಾವ ಮಂತ್ರವೇ ಆಗಲಿ, ಆ ಮಂತ್ರವನ್ನು ಜಪ ಮಾಡಿ ಅನುಷ್ಠಾನ ಮಾಡಿ ತನ್ನದನ್ನಾಗಿ ಮಾಡಿಕೊಂಡರೆ ಸರ್ವವನ್ನು ದಯಪಾಲಿಸುತ್ತದೆ