ಭಾಗವತ ಕಥೆಗಳು

ಪರೀಕ್ಷಿತ್ ರಾಜನಿಗೆ ಜ್ಞಾನೋಪದೇಶ ಅಭಿಮನ್ಯುವಿನ ಹೆಂಡತಿಯ ಹೊಟ್ಟೆಯಲ್ಲಿ ಅವತರಿಸಿದವನೇ ಪರೀಕ್ಷಿತ್. ಪಾಂಡವರ ಸಂತತಿ. ಅವನು ರಾಜನಾಗಿ ಒಂದು ದಿವಸ ಅರಣ್ಯದಲ್ಲಿ ಹೋಗುತ್ತಿದ್ದಾನೆ. ಬಾಯಾರಿಕೆ ಆಯಿತು. ಅಲ್ಲಿ ಒಂದು ಆಶ್ರಮ ಕಂಡಿತು. ಒಬ್ಬ ಮಹಾತ್ಮರು ಧ್ಯಾನಮಗ್ನರಾಗಿ ಕುಳಿತಿದ್ದಾರೆ, ಮಾತನಾಡಿಸಲಿಲ್ಲ. ಇವನಿಗೆ ಸಹನೆ ಇಲ್ಲ. ರಾಜನ ಅಹಂಕಾರ ಹೊರಗೆ ಹೋಗಿ ಅಲ್ಲಿ ಸತ್ತು ಬಿದ್ದ ಹಾವನ್ನು ಕೋಲಿನಿಂದ ತಂದು ಆ ಋಷಿಯ ಕೊರಳಿಗೆ ಹಾಕಿದ. ರಾಜಧಾನಿ ಕಡೆಗೆ ಹೊರಟ. ಆ ಋಷಿಯೇ ಶಮೀಕ ಋಷಿ. ಅವರ ಮಗ ಶೃಂಗ ಋಷಿ ಬಂದು ನೋಡುತ್ತಾನೆ. ತಂದೆ ಕೊರಳಲ್ಲಿ ಸತ್ತ ಹಾವು. ಬಹಳ ಸಿಟ್ಟು ಬಂತು. ‘ಬ್ರಹ್ಮಚಾರಿ ಶತಮರ್ಕಟ’ ಈ ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿದವರು ಇನ್ನು 7 ದಿವಸಗಳಲ್ಲಿ ಸರ್ಪ ಕಚ್ಚಿ ಸಾಯಲಿ ಎಂದು ಶಾಪ ಕೊಟ್ಟ. ಆಗ ಆ ಶಮೀಕ ಋಷಿ ಯೋಚಿಸಿ ಅವನು ಮತ್ತಾರೂ ಅಲ್ಲ. ಈ ದೇಶದ ರಾಜ ಪರೀಕ್ಷಿತ. ಹೋಗಿ ನಿನ್ನ ಶಾಪದ ವಿಷಯ ತಿಳಿಸಿ ಬಾ ಎಂದ. ಶೃಂಗ ಋಷಿ ಹೋಗಿ ಶಾಪದ ವಿಷಯ ತಿಳಿಸಿದ.

ಶಾಪದ ಭಯದಿಂದ ಪರೀಕ್ಷಿತನು ಶುಕದೇವನಿಂದ ಭಾಗವತನನ್ನು ಕೇಳಿದ, ಸರ್ಪದ ಭಯದಿಂದ ಸಮುದ್ರ ಮಧ್ಯದಲ್ಲಿದ್ದಾನೆ. ಆಗ ಒಬ್ಬ ಬಂದು ಹಣ್ಣು ಕೊಟ್ಟ. ಆ ಹಣ್ಣಿನಲ್ಲಿ ಒಂದು ಸಣ್ಣ ಹುಳು ಇತ್ತು. ಅದು ದೊಡ್ಡ ಹಾವಾಗಿ ಪರೀಕ್ಷಿತನನ್ನು ಕಚ್ಚಿ ಸಾಯಿಸಿತು. ಯಾರಿಗಾದರೂ ಅವಮಾನ ಮಾಡಿದರೆ ಆ ಅವಮಾನವು ತನ್ನನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಯಾರಿಗೂ ಯಾವ ರೀತಿಯಿಂದಲೂ ಅವಮಾನ ಮಾಡಬಾರದು. ಸತ್ತ ಹಾವು ಋಷಿಯ ಕೊರಳಲ್ಲಿ ಹಾಕಿದ್ದು ಮಹಾದೋಷ. ಅದು ತಿರುಗಿ ಅವನನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಯಾರಿಗೂ ಯಾವ ರೀತಿಯ ಅವಮಾನ ಮಾಡಬಾರದು.