ಈ ಉಪನಿಷತ್ತು ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಯ ಸಂಹಿತೆ, ಬ್ರಾಹ್ಮಣ, ಅರಣ್ಯಕ ಇವುಗಳಿಂದ ಕೂಡಿದೆ. ತೈತ್ತಿರೀಯ ಅರಣ್ಯಕದ ಏಳೂ ಮತ್ತು ಒಂಬತ್ತನೆಯ ಪ್ರಪಾಠಕಗಳೇ ಶಿಕ್ಷಾವಲ್ಲಿ, ಆನಂದವಲ್ಲಿ ಮತ್ತು ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿಂದ ಶೃಂಗರಿಸಲ್ಪಟ್ಟಿದೆ. ಬ್ರಹ್ಮಸೂತ್ರಗಳ ಕರ್ತರು ಈ ಉಪನಿಷತ್ತನ್ನು ಬ್ರಹ್ಮಸೂತ್ರಗಳ ವ್ಯಾಖ್ಯಾನದಲ್ಲಿ ಬಹಳವಾಗಿ ಬಳಸಿದ್ದಾರೆ. ವೇದಕ್ಕೆ ಭಾಷ್ಯ ಬರೆದ ಸಾಯಣಾಚಾರ್ಯರು ತೈತ್ತಿರೀಯವನ್ನು ಬಹಳವಾಗಿ ಬಳಸಿದ್ದಾರೆ.
ಪುಟ: 108 ಬೆಲೆ: 80 ರೂ.ಗಳು