Sri Prabodha Darshanam

ಶ್ರೀ ಪ್ರಬೋಧ ದರ್ಶನಂ


ವಿವರಣೆ:


ಶ್ರೀ ಪ್ರಬೋಧದರ್ಶನಂ (ಶ್ರೀ ಪ್ರಬೋಧಾನಂದಸ್ವಾಮೀಜಿಗಳವರ ಜೀವನ ಚರಿತ್ರೆ )
ಗೀತೆಯಲ್ಲಿ ಬರುವ "ಶುಚೀನಾಂಶ್ರೀಮತಾಂಗೇಹೇ" ಎಂಬ ವಾಕ್ಯದಂತೆ ಸಂಸ್ಕಾರವಂತರ, ಧರ್ಮನಿಷ್ಠರ, ಮನೆತನದಲ್ಲಿ ಹುಟ್ಟಿ ಅಂತಃಕರಣವನ್ನು ಶುದ್ದಿ ಮಾಡಿಕೊಂಡು, ಶ್ರೀಗುರುಗಳ ಸನ್ನಿಧಿಯನ್ನು ಸೇರಿ ಶ್ರವಣ, ಮನನ, ನಿಧಿದ್ಯಾಸ ಮಾಡಿ ಸ್ವಸ್ವರೂಪವಾದ ಆತ್ಮಜ್ಞಾನವನ್ನು ಪಡೆದು ಉಳಿದ ಜೀವಿತಾವಧಿಯಲ್ಲಿ ಅನೇಕ ವೇದಾಂತ ಗ್ರಂಥಗಳನ್ನು ರಚಿಸಿ ಅಧ್ಯಾತ್ಮ ವಿದ್ಯೆಯನ್ನು ಎಲ್ಲರಿಗೂ ಪಸರಿಸಿ ಪಾಮರರನ್ನು ಜೀವನ್ಮುಕ್ತಿಯನ್ನು ಪಡೆಯುವಂತೆ ಮಾಡಿದ ಮಹಾ ಪುರುಷರು ಇವರು. ಇವರನ್ನು ಮಹಾತ್ಮರೆಂದು ಗೀತೆಯಲ್ಲಿ ಶ್ರೀಕೃಷ್ಣಭಗವಂತನು "ಮಹಾತ್ಮಾನಸ್ತುಮಾಮ್ಪಾರ್ಥದೈವೀಂಪ್ರಕೃತಿಮಾಶ್ರಿತಾ" ಎಂದಿದ್ದಾನೆ. ಶ್ರೀ ಪ್ರಬೋಧಾನಂದನಾಮಾಂಕಿತದಿಂದ ಸನ್ಯಾಸಾಶ್ರಮವನ್ನು ಪಡೆದು ಬೆಂಗಳೂರಿನ ಜ್ಞಾನಭಾರತಿ ಹತ್ತಿರ ಶ್ರೀ ಶಂಕರಾನಂದ ಆಶ್ರಮವನ್ನು ಸ್ಥಾಪನೆ ಮಾಡಿ ಪ್ರಸ್ಥಾನತ್ರಯ ಗ್ರಂಥಗಳಾದ ಭಗವದ್ಗೀತೆ ಉಪನಿಷತ್ತು ಬ್ರಹ್ಮಸೂತ್ರ ಗ್ರಂಥಗಳನ್ನುವ್ಯಾಖ್ಯಾನಿಸಿ. ಪ್ರಕರಣ ಗ್ರಂಥಗಳಾದ ವಿಚಾರ ಸಾಗರ, ವಿಚಾರ ಚಂದ್ರೋದಯ, ವೇದಾಂತ ಪಂಚದಶಿ, ಇನ್ನೂ ಅನೇಕ ವೇದಾಂತ ಗ್ರಂಥಗಳನ್ನು ರಚಿಸಿ ಈ ಲೋಕಕ್ಕೆಧಾರೆ ಎರೆದಿದ್ದಾರೆ. ಇವರು ಪೂರ್ವಾಶ್ರಮದಲ್ಲಿ ಶಿಕ್ಷಕರಾಗಿ, ಕೃಷಿಕರಾಗಿ ಅನೇಕ ಸಮಾಜ ಸೇವೆಗಳನ್ನು ಮಾಡಿ "ಆಡುಮುಟ್ಟದಸೊಪ್ಪಿಲ್ಲದಂತೆ" ಎಲ್ಲಾ ಸಮಾಜ ಮುಖೇನ ಕೆಲಸವನ್ನು ಮಾಡಿದರು. ಹೀಗೆ ಅವರ ಜೀವನದ ಅನೇಕ ಘಟನೆಗಳನ್ನು ಗ್ರಂಥದ ಮೂಲಕ ಲೋಕಾರ್ಪಣೆ ಮಾಡಿದೆ.
ಪುಟ : 100  ಬೆಲೆ : 60ರೂ.ಗಳು