ಇದು ಕೇವಲ 12 ಮಂತ್ರಗಳಿಂದ ಪರಿಪೂರ್ಣವಾಗಿದೆ.ಇದಕ್ಕೆ ಶ್ರೀ ಶಂಕರ ಭಗವತ್ಪಾದರ ಪರಮಗುರುವಾದ ಶ್ರೀ ಗೌಡಪಾದಾಚಾರ್ಯರು ಆ 12 ಮಂತ್ರಗಳಿಗೆ ಕಾರಿಕೆಗಳನ್ನು ಬರೆದಿದ್ದಾರೆ. ಇದರಲ್ಲಿ ಆಗಮಪ್ರಕರಣ, ವೈತಧ್ಯಪ್ರಕರಣ, ಅದ್ವೈತಪ್ರಕರಣ ಮತ್ತು ಅಲಾತ ಶಾಂತಿಪ್ರಕರಣ ಎಂಬ ನಾಲ್ಕು ಪ್ರಕರಣಗಳನ್ನಾಗಿ ಮಾಡಿದ್ದಾರೆ. 108 ಉಪನಿಷತ್ತುಗಳ ಮೇಲೆ ವ್ಯಾಖ್ಯಾನ ಮಾಡಿರುವ ಉಪನಿಷತ್ ಬ್ರಹ್ಮ ಯೋಗಿಯು ಈ ಉಪನಿಷತ್ತನ್ನು “ಸರ್ವವೇದಾಂತ ಸಾರಿಷ್ಠ” ಎಂದು ಕರೆದಿದ್ದಾರೆ. ಶ್ರೀ ಶಂಕರಭಗವತ್ಪಾದರು ವೇದಾಂತಾರ್ಥ ಸಾರಸಂಗ್ರಹ ಭೂತಮ್ ಎಂದು ಕರೆದಿದ್ದಾರೆ.ಇದಕ್ಕೆ ಗೌಡಪಾದರು 215 ಕಾರಿಕೆಗಳನ್ನು ಬರೆದಿದ್ದಾರೆ.ಇದು ಅಥರ್ವಣವೇದಕ್ಕೆ ಸೇರಿದ ಅರಣ್ಯಕ ಭಾಗ ಇದರಲ್ಲಿ ಪ್ರಣವದ ಅಕಾರ ಉಕಾರ ಮಕಾರಗಳಿಂದ ಪರಮಾತ್ಮ ಸ್ವರೂಪವನ್ನು ವರ್ಣಿಸಿದೆ. ಈ ಉಪನಿಷತ್ತಿನ ಮಂತ್ರ ದ್ರಷ್ಟ ಋಷಿ ಮಾಂಡೂಕ್ಯ.
ಪುಟ : 412 ಬೆಲೆ : 300 ರೂ.ಗಳು