Iytharayapanishad

ಐತರೇಯೋಪನಿಷತ್ತು


ವಿವರಣೆ:


ಇದು ಋಗ್ವೇದದ ಸಂಹಿತೆಯು, ಶಾಕಲ ಸಂಹಿತೆ ಎಂದೂ ಶಾಂಖಾಯನ ಸಂಹಿತೆ ಎಂದೂ ಎರಡು ಬಗೆಯಾಗಿರುತ್ತದೆ.ಶಾಕಲ ಸಂಹಿತೆಯ ಮಂತ್ರಗಳನ್ನು ವಿವರಿಸುವ ಭಾಗಕ್ಕೆ ಐತರೇಯ ಬ್ರಾಹ್ಮಣವೆಂದು ಹೆಸರು. ಆ ಬ್ರಾಹ್ಮಣಗಳಿಗೆ ಪರಿಶಿಷ್ಟವಾಗಿ ಅರಣ್ಯಕಗಳು ಸೇರಿಕೊಂಡಿದೆ. ಐತರೇಯ ಬ್ರಾಹ್ಮಣದ ಅರಣ್ಯಕದಲ್ಲಿ ಈ ಉಪನಿಷತ್ತು ಸೇರಿದೆ. ಆದ್ದರಿಂದ ಐತರೇಯ ಉಪನಿಷತ್ತು ಎಂದು ಹೆಸರು ಬಂದಿದೆ. ಮತ್ತೊಂದು ವಿಚಾರ-ಮಹಿದಾಸನು ಸಂಪ್ರದಾಯ ಪ್ರವರ್ತಕನು ಆ ಮಹೀದಾಸನ ತಾಯಿಯ ಹೆಸರು “ಇತರಾ”, ಇತರೆಯ ಮಗನಾದ ಮಹಿದಾಸನಿಂದ ಬಂದಿದ್ದರಿಂದ ಐತರೇಯ ಎಂಬ ಹೆಸರು ಬಂದಿದೆ. ಐತರೇಯ ಅರಣ್ಯಕದ ನಾಲ್ಕು, ಐದು ಮತ್ತು ಆರನೇ ಅಧ್ಯಾಯಗಳೇ ಐತರೇಯೋಪನಿಷತ್ತು. ಇದು ಒಟ್ಟಿಗೆ ಆರು ಖಂಡಗಳಿಂದ ಪೂರ್ಣ ಆಗಿದೆ. ಋಗ್ವೇದದ ಸಂಹಿತೆಯ ಎರಡನೇ ಅರಣ್ಯಕದ ಮೂರು ಅಧ್ಯಾಯಗಳೇ ಈ ಉಪನಿಷತ್ ಇದರಲ್ಲಿ ಕೇವಲ ಆತ್ಮ ವಿಚಾರವೇ ಇದೆ. ಶಂಕರರು ಇದಕ್ಕೆ ಮಾತ್ರ ಭಾಷ್ಯ ಬರೆದಿದ್ದಾರೆ. ಈ ಉಪನಿಷತ್ತಿನಲ್ಲಿ ‘ಪ್ರಜ್ಞಾನಂ ಬ್ರಹ್ಮ’ ಎಂಬ ಮಹಾವಾಕ್ಯವಿದೆ. ಇದರಲ್ಲಿ 34 ಮಂತ್ರಗಳು ಇವೆ.
ಪುಟ : 72   ಬೆಲೆ : 50 ರೂ.ಗಳು