ಶ್ರೀ ಶಂಕರಾನಂದ ಸ್ವಾಮಿಜಿಗಳವರ ಗೀತೋಪದೇಶ ಭಾಗ-2 (7-12ಅಧ್ಯಾಯದವರೆಗೆ)
ಶ್ರೀಶ್ರೀಶ್ರೀ ಶಂಕರಾನಂದ ಸ್ವಾಮೀಜಿ ಗಳವರ ಪ್ರಖ್ಯಾತವಾದ ಭಗವದ್ಗೀತೆ ಉಪನ್ಯಾಸದ ಎರಡನೇ ಸಂಪುಟದಲ್ಲಿಏಳನೇ ಅಧ್ಯಾಯದಿಂದ 12ನೇ ಅಧ್ಯಾಯದವರೆಗೆ ವಿಭಾಗಿಸಲ್ಪಟ್ಟಿದೆ. ಏಳನೇ ಅಧ್ಯಾಯದ ಜ್ಞಾನವಿಜ್ಞಾನಯೋಗಃ ,8ನೇ ಅಧ್ಯಾಯದ ಅಕ್ಷರಬ್ರಹ್ಮಯೋಗ, 9ನೇ ಅಧ್ಯಾಯದ ರಾಜವಿದ್ಯಾರಾಜಗುಹ್ಯಯೋಗಃ, ಹತ್ತನೇ ಅಧ್ಯಾಯದವಿಭೂತಿಯೋಗಃ, ಹನ್ನೊಂದನೇ ಅಧ್ಯಾಯದ ವಿಶ್ವರೂಪದರ್ಶನಯೋಗಃ, 12 ನೇ ಅಧ್ಯಾಯದ ಭಕ್ತಿಯೋಗವನ್ನು ಇದರಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಎರಡನೇ ಸಂಪುಟದಲ್ಲಿ ತತ್ವಮಸಿ ವಾಕ್ಯದಲ್ಲಿರುವ 'ತತ್ "ಪದ ಅಂದರೆ ಭಗವಂತನ ವರ್ಣನೆಯನ್ನು ಮುಖ್ಯವಾಗಿ ಪ್ರತಿಪಾದಿಸಲ್ಪಟ್ಟಿದೆ ಈ ಆರು ಅಧ್ಯಾಯಗಳ ಪ್ರತಿಯೊಂದು ಶ್ಲೋಕಗಳಿಗೆಪ್ರತಿಪದಾರ್ಥ, ತಾತ್ಪರ್ಯ ಹಾಗೂ ವ್ಯಾಖ್ಯಾನವನ್ನು ಅತ್ಯಂತ ಸರಳವಾಗಿ ನಿರೂಪಿಸಲ್ಪಟ್ಟಿದೆ.
ಪುಟ : 480 ಬೆಲೆ : 400ರೂ.ಗಳು