ಭಗವದ್ಗೀತೆಯ ಎರಡನೇ ಅಧ್ಯಾಯದ ಸಾಂಖ್ಯ ಯೋಗವನ್ನು 5 ಭಾಗವಾಗಿ ವಿಭಾಗಿಸಲ್ಪಟ್ಟಿದೆ. 1)) ಅರ್ಜುನನ ಶರಣಾಗತಿ 2) ಆತ್ಮಜ್ಞಾನದ ಬೋಧೆ 3) ಧರ್ಮಾಷ್ಟಕ 4) ನಿಷ್ಕಾಮ ಕರ್ಮ ಯೋಗ 5) ಸ್ಥಿತಪ್ರಜ್ಞನಲಕ್ಷಣ. ಇದರಲ್ಲಿ ಎರಡನೇ ಭಾಗವಾದ ಆತ್ಮಜ್ಞಾನದ ಬೋಧನೆಯನ್ನು11ನೇ ಶ್ಲೋಕದಿಂದ 30ನೇ ಶ್ಲೋಕದ ವರೆಗೆ ಹೇಳಲ್ಪಟ್ಟಿದೆ. ಈ ಗ್ರಂಥದಲ್ಲಿ ಆತ್ಮಜ್ಞಾನದ ಬೋಧೆಯನ್ನು ಎಲ್ಲಾ ಶಾಸ್ತ್ರಗಳಲ್ಲಿರುವ ಸಾರಸರ್ವಸ್ವವನ್ನು ಕೇವಲ 18 ಶ್ಲೋಕಗಳಲ್ಲಿ ಹೇಳಿರುವುದು ಭಗವಂತನ ವೈಶಿಷ್ಟ್ಯ ಹಾಗೂ ಜಾಣ್ಮೆ.
ದುಃಖಕ್ಕೆ ಕಾರಣ ವ್ಯಾಮೋಹ, ವ್ಯಾಮೋಹಕ್ಕೆ ಕಾರಣ ಅಹಂಕಾರ, ಅಹಂಕಾರಕ್ಕೆ ಕಾರಣ ಅಜ್ಞಾನ. ಆತ್ಮವನ್ನು ತಿಳಿದರೆ ದುಃಖ ವ್ಯಾಮೋಹ ಅಹಂಕಾರ ಅಜ್ಞಾನ ಎಲ್ಲಾ ನಿವಾರಣೆಯಾಗುತ್ತದೆ ಎಂಬ ಆತ್ಮಬೋಧ ಪಡೆದುಕೊಂಡು ಮುಕ್ತರಾಗುವ ಉಪಾಯವನ್ನು ಈ ಗ್ರಂಥದಲ್ಲಿ ಉಪದೇಶಿಸಲ್ಪಟ್ಟಿದೆ.
ಪುಟ : 166 ಬೆಲೆ : 100 ರೂ.ಗಳು