ಶ್ರೀ ಶಂಕರಭಗವತ್ಪಾದರವರು ಭಾಷ್ಯ ಬರೆದ ಉಪನಿಷತ್ತುಗಳಲ್ಲಿ ಛಾಂದೋಗ್ಯ ಮತ್ತು ಬೃಹದಾರಣ್ಯಕಗಳೇ ದೊಡ್ಡವೆಂದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಅದರಲ್ಲೂ ಛಾಂದೋಗ್ಯದಲ್ಲಿ ಹೆಚ್ಚಾಗಿ ಉಪಾಸನೆಯೇ ತುಂಬಿದೆ. ಅಂದರೆ ಕಥೆಗಳು ಎಲ್ಲಾಖಂಡದಲ್ಲೂ ಹಾಸು ಹೊಕ್ಕಾಗಿದೆ. ಆ ಕಥೆಗಳನ್ನೇ ಬೇರೆ ಮಾಡಿ ಈ ಗ್ರಂಥದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಬಹಳ ಉಪಯುಕ್ತವಾದ ಕಥೆಗಳೇ ತುಂಬಿ ತುಳುಕಿದೆ.
ಪುಟ: 124 ಬೆಲೆ: 80 ರೂ.ಗಳು