Bhrama sootra

ಬ್ರಹ್ಮ ಸೂತ್ರ


ವಿವರಣೆ:


ಭಾರತೀಯ ತತ್ವಶಾಸ್ತ್ರಗಳನ್ನು ಪ್ರಸ್ಥಾನತ್ರಯಗಳೆಂದು ವಿಂಗಡಿಸಲಾಗಿದೆ ಅವುಗಳು 1) ಉಪನಿಷತ್‍ಗಳು 2) ಬ್ರಹ್ಮಸೂತ್ರಗಳು 3) ಭಗವದ್ಗೀತೆ. ಬ್ರಹ್ಮಸೂತ್ರ, ಸರ್ವ ಶಾಸ್ತ್ರಗಳನ್ನು ಹಾಗೂ 18 ಪುರಾಣಗಳನ್ನು ಬರೆದ ಬಾದರಾಯಣದಿಂದ ರಚನೆಯಾಗಿದೆ.ಇವು 555 ಸೂತ್ರಗಳು ಇದು ದರ್ಶನ ಶಾಸ್ತ್ರ, ಇವುಗಳನ್ನು ವೇದಾಂತ ಸೂತ್ರಗಳೆಂದೂ, ವೇದಾಂತ ಮೀಮಾಂಸೆ ಎಂದೂ, ಶಾರೀರಿಕ ಮೀಮಾಂಸೆ ಎಂದೂ, ವೇದಾಂತ ದರ್ಶನವೆಂದೂ ಕರೆಯುತ್ತಾರೆ.ಇದು ಅತ್ಯಂತ ಮಹತ್ವಪೂರ್ಣ ಗ್ರಂಥ, ಇದನ್ನು ಕೆಲವರು ಶಾರೀರಿಕ ದರ್ಶನವೆಂದೂ, ಪೂರ್ಣಪ್ರಜ್ಷ ದರ್ಶನವೆಂದೂ ಕರೆಯುತ್ತಾರೆ.ಅನೇಕ ಮಹಾತ್ಮರು ಇದಕ್ಕೆ ಅನೇಕ ವಿಧವಾದ ಭಾಷ್ಯ ಬರೆದಿದ್ದಾರೆ.ಅದರಲ್ಲಿ ಶ್ರೀ ಶಂಕರ ಭಗವತ್ಪಾದರ ಶಾರೀರಿಕ ಭಾಷ್ಯೆಯೇ ಸುಪ್ರಸಿದ್ದವಾದುದು, ಇದೊಂದು ವ್ಯಾಸರ ಅಪೂರ್ವರಚನೆ, ಇದು ನಾಲ್ಕು ಅಧ್ಯಾಯಗಳು 16 ಪಾದಗಳು 191 ಅಧಿಕರಣಗಳು 555 ಸೂತ್ರಗಳಿವೆ. ಶರೀರದಲ್ಲಿರುವ ಜೀವನ ಬ್ರಹ್ಮತ್ವವನ್ನು ನಿರ್ಣಯಮಾಡುವುದರಿಂದ ಇದಕ್ಕೆ ಶಾರೀರಿಕ ಸೂತ್ರವೆಂದು ಕರೆಯಲಾಗಿದೆ.ಇದು ಒಂದು ಅಪದೃಶ್ಯ ಸಾಹಿತ್ಯ, ಇದು ಉಪನಿಷತ್ತುಗಳಲ್ಲಿರುವ ಪ್ರಮೇಯವನ್ನು ನಿರ್ಣಯಿಸಲು ಇದನ್ನು ರಚಿಸಿದ್ದಾರೆ.ಪ್ರಸ್ಥಾನತ್ರಯಗಳಲ್ಲಿ ಇದಕ್ಕೆ ಉನ್ನತ ಸ್ಥಾನವಿದೆ.
ಪುಟ: 592   ಬೆಲೆ: 450 ರೂ.ಗಳು