Anushtana 7 year

ಅನುಷ್ಟಾನ ಶ್ಲೋಕ (7ನೇ ವರ್ಷದ ಗೀತಾಜಯಂತಿ)


ವಿವರಣೆ:


15 ನೇ ಅಧ್ಯಾಯದ 14ನೇ ಶ್ಲೋಕ:-
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾ ದೇಹ ಮಾಶ್ರಿತಃ
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್||

ಗೀತೆಯ 15ನೇ ಅಧ್ಯಾಯವನ್ನು ಪುರುಷೋತ್ತಮ ಪ್ರಾಪ್ತಿ ಯೋಗವೆಂದೂ ಪ್ರಸಾದ ಯೋಗವೆಂದೂ ಕರೆಯುತ್ತಾರೆ. ಈ ಅಧ್ಯಾಯವನ್ನು ಪ್ರಸಾದಯೋಗವೆಂದು ಕರೆಯಲು ಈ ಶ್ಲೋಕವೇ ಕಾರಣ. ಏಕೆಂದರೆ ಇದರಲ್ಲಿ ಭಗವಂತನು ಜಠರಾಗ್ನಿ ಸ್ವರೂಪದಿಂದ ಸರ್ವ ಪ್ರಾಣಿಗಳದೇಹದಲ್ಲಿದ್ದು ಅವರು ತಿನ್ನುವನಾಲ್ಕು ವಿಧವಾದ ಆಹಾರವನ್ನು (ಭಕ್ಷ್ಯ, ಭೋಜ್ಯ, ಜೋಷ್ಯ, ಲೇಹ್ಯ) ಪ್ರಾಣಾಪಾನದ ಆಧಾರದಿಂದ ಜೀರ್ಣ ಮಾಡುತ್ತೇನೆ ಎಂದಿದ್ದಾನೆ.
ಪುಟ : 40   ಬೆಲೆ: 30 ರೂ.ಗಳು